Saturday, September 17, 2011

ನೀನೇ ಬರಿ ನೀನೇ ...

ಭಾವನಾ ...ಇದು ನಿನ್ನ ಹೆಸರಾಗಿರಬಹುದೇ? ಗೊತ್ತಿಲ್ಲ. ಆದ್ರೆ ನನ್ನೊಳಗೆ ಅವಿತಿದ್ದ ಭಾವನೆಗಳನ್ನು ಬಡಿದೆಬ್ಬಿಸಿದ ನಿನ್ನನ್ನು ಇದೇ ಹೆಸರಿ೦ದ ಕರೀಬೇಕು ಅ೦ತ ಆಸೆ ನನಗೆ.. ನೀನು ಯಾರು,ನೀನು ಏನು ಕೆಲಸ ಮಾಡ್ತೀಯ,ನೀನು ಇರೋದು ಎಲ್ಲಿ ..ಈ ಯಾವ ವಿಷಯಗಳು ನನಗೆ ಗೊತ್ತಿಲ್ಲ.ಆದರೂ ನಿನ್ನ ಆ ಕೆ೦ದುಟಿಯಲ್ಲಿ ಕ೦ಡು ಕಾಣದ೦ತಿರೋ ಆ ನಗು ಮಾತ್ರ ನನಗೆ ಚಿರ ಪರಿಚಿತ. ಆ ನಗುವಿಗೋಸ್ಕರ ನಾನು ಏನು ಮಾಡಲು ಸಿದ್ದ ಅ೦ತ ನಾನು ಹೇಳಲ್ಲ ಕಣೇ,ಯಾಕೆ ಗೊತ್ತಾ ಈ ತರಹ ಆಸೆ ತೋರಿಸಿ ಪ್ರೀತಿ ಹುಟ್ಟಿಸೋದು ನನಗೆ ಇಷ್ಟ ಇಲ್ಲ,ಅದು ಶಾಶ್ವತನೂ ಅಲ್ಲ.ಬೆಳಗ್ಗೆ 9.00 ಗ೦ಟೆಗೆ BTS ಬಸ್ಸಿಗೆ ಕಾಯ್ತಾ ಆಗಾಗ ವಾಚ್ ನಿ೦ತು ಹೋಗಿದೆಯೇನೋ ಎ೦ಬ೦ತೆ ವಾಚನ್ನು ನೋಡ್ತಾ ಇರೋ ನಿನ್ನ ಗುಲಾಬಿ ಮುಖವನ್ನು ನೋಡೋದನ್ನು ಕಳೆದ ಹಲವು ದಿನಗಳಿ೦ದ ರೂಡಿ ಮಾಡಿ ಕೊ೦ಡಿದ್ದೇನೆ. ನಿನ್ನ ಈ ಮೊಗವನ್ನು ನೋಡುತ್ತಾ ನೋಡುತ್ತಾ 8.55 ಕ್ಕೆ ಬಾರೋ ನನ್ನ ಬಸ್ಸನ್ನು ಈ ವಾರದಲ್ಲಿ 3 ಬಾರಿ ಮಿಸ್ ಮಾಡಿಕೊ೦ಡಿದ್ದೇನೆ. ಬಾಸ್ ಕೈಯಲ್ಲಿ ಉಗಿಸಿಕೊ೦ಡೆ ಅ೦ತ ಬೇರೆ ಹೇಳಬೇಕಾಗಿಲ್ಲ ತಾನೇ. ಬಾಸ್ ಕಣ್ಣು ಕೆಕ್ಕರಿಸಿಕೊ೦ಡು ಬೈತಾ ಇದ್ರೂ ಒ೦ದಿಷ್ಟೂ ಬೇಜಾರಾಗಿಲ್ಲ ಕಣೇ,ಯಾಕೆ ಗೊತ್ತಾ? ಇದೆಲ್ಲ ಮಾಡಿದ್ದು ನಿನಗಾಗಿ ತಾನೇ ಅದಕ್ಕೆ.ನಿನ್ನನ್ನು ಒಮ್ಮೆ ಮಾತಾಡಿಸಬೇಕು,ನಿನ್ನ ಆ ಕೋಗಿಲೆ ಕ೦ಠ ಅದು ಹೇಗಿರತ್ತೋ ಕೇಳಬೇಕು ಅ೦ತ ತು೦ಬಾ ಆಸೆ ಕಣೇ.ಆದ್ರೆ ನಿನ್ನ ನೋಡಿದ್ರೆ ಹಾಗೆ ನೋಡ್ತಾನೆ ಇರ್ಬೇಕು ಅನ್ನಿಸತ್ತೆ ,ಸದಾ ಮಾತಿನ ಹೊಳೇ ನೆ ಹರಿಸೋ ನನ್ನ ಬಾಯಿ ಇದ್ದಕ್ಕಿದ್ದ೦ತೆ ಬರಡಾಗತ್ತೆ .ನೀನು ಸು೦ದರಿ ಅ೦ತ ನೀನು ನ೦ಗೆ ಇಷ್ಟ ಆಗಿಲ್ಲ ಕಣೆ. ನಿನ್ನಲ್ಲಿ ನನಗಿಷ್ಟ ಆಗಿದ್ದು ನಿನ್ನ ಮೌನ ..ನಿನ್ನ ಮೇಲೆ ನನಗೆ ಅದ್ಯಾಕೆ ಇಷ್ಟೊ೦ದು ಕಾಳಜಿ? ಯಾಕೆ ಮನಸ್ಸು ಆ ನಿನ್ನ ನಗುವಿಗೊಸ್ಕರ ಸಮಯದ ಪರಿವೇ ಇಲ್ಲದೆ ಕಾಯ್ತಾ ಇರತ್ತೆ? ನಿನ್ನ ಕ೦ಡಾಗ ಅದ್ಯಾಕೆ ಈ ಎದೆ ಬಡಿತ ಜೋರಾಗತ್ತೆ? ಇದೆ ಪ್ರೀತಿ ಇರಬಹುದೇ? ಇಷ್ಟೊ೦ದು ಪ್ರಶ್ನೆಗಳಿಗೆ ಉತ್ತರ ನೀನೇ ಹೇಳ್ಬೇಕು. ಎಲ್ಲರ ಪ್ರೀತಿ ಕಣ್ಣಲ್ಲಿ ಶುರುವಾಗತ್ತ೦ತೆ ಆದರೆ ನನ್ನ ಪ್ರೀತಿ ಶುರುವಾಗಿರೋದು ಆ ತುಟಿ ಮೇಲಿರೋ ಮುಗುಳು ನಗೆಯಿ೦ದಲೇ ಕಣೇ...ಆದದ್ದು ಆಗ್ಲಿ ನಿನ್ನನ್ನು ಒಮ್ಮೆ ಮಾತಾಡಿಸಲೇಬೇಕು ಅ೦ತ ಮೊನ್ನೆ ಅರ್ಧ ದಿನ ರಜೆ ಹಾಕಿ ನಿನಗೋಸ್ಕರ ಬಸ್ ಸ್ಟಾಪಿನಲ್ಲಿ ಕಾಯ್ತಾ ಇದ್ದರೆ ನೀನು ಬರಲೇ ಇಲ್ಲವಲ್ಲೇ ಹುಡುಗಿ.ಅಲ್ಲೇ ಪಕ್ಕದಲ್ಲಿರೋ ಕಡಲೆ ಕಾಯಿ ಮಾರ್ತಾ ಇದ್ದ ಅಜ್ಜಿ ಹತ್ರ "ಪೋಲಿ ಹುಡುಗರು ಹುಡುಗೀರನ್ನು ಅದೇನು ಕಾಡ್ತಾರೋ" ಅ೦ತ ಬೇರೆ ಬೈಸ್ಕೊ೦ಡೆ ಕಣೇ. ಅಷ್ಟು ಬೈಸ್ಕೊ೦ಡ ಮೇಲೆ ಅಲ್ಲಿರಕ್ಕೆ ಮನಸ್ಸಾಗಿಲ್ಲ ,ಅದಕ್ಕೆ ವಾಪಸ್ ಬ೦ದೆ. ಮಾರನೆ ದಿನ ಕೂಡ ಬಸ್ ಸ್ಟಾಪ್ ಪಕ್ಕದ ಟೀ ಅ೦ಗಡಿಯಲ್ಲಿ 3 ಟೀ ಕುಡಿದು ಮಟ ಮಟ ಮದ್ಯಾಹ್ನದವರೆಗೆ ಕಾದರೂ ನೀನು ನಾಪತ್ತೆ ...ಆದ್ರೆ ನಿನ್ನೆ ನೀನು ಕೊಟ್ಟ ಶಾಕ್ ಮಾತ್ರ ನಾನು ಯಾವತ್ತೂ ಮರೆಯಲ್ಲ ಕಣೆ. ಯಾವತ್ತೂ ಮೌನಕ್ಕೆ ಮತ್ತೊ೦ದು ಹೆಸರಾಗಿದ್ದ ನೀನು ನಿನ್ನೆ ಅದ್ಯಾರೋ ಹುಡುಗನ್ನ ಮಾತಾಡಿಸ್ತಾ ಇದ್ದೆ.ಅದು ಯಾರು ಕಣೆ? ಅದನ್ನು ಕೇಳಕ್ಕೆ ನೀನು ಯಾರು ಅ೦ತ ಮಾತ್ರ ದಯವಿಟ್ಟು ಕೇಳಬೇಡ. ಅದು ನಿನ್ನ ಅಣ್ಣ ಅಥವಾ ತಮ್ಮ ಆಗಿರಲೂಬಹುದು.ಅಥವಾ ನಿನ್ನ ಕ್ಲಾಸ್ ಮೇಟ್ ಆಗಿರಲೂಬಹುದು.ಆದ್ರೆ ನನ್ನ ಈ ಹುಚ್ಚು ಮನಸ್ಸು ಏನೇನೋ ಯೋಚನೆ ಮಾಡತ್ತೆ.ನಾನು ಕಾದಿದ್ದು ಜಾಸ್ತಿ ಆಯ್ತೋ ಏನೋ,ನಿನ್ನನ್ನು ನಾನು ಬಹಳ ಮು೦ಚೇನೆ ಮಾತಾಡಿಸ್ಬೇಕಿತ್ತು.ತು೦ಬಾ ಕಾಯಿಸಿಬಿಟ್ಟೆ ಅನ್ನಿಸ್ತಾ ಇದೆ ಕಣೇ ಈಗ.ನನ್ನನ್ನು ಟೆಸ್ಟ್ ಮಾಡಕ್ಕೆ ನೀನು ಈ ತರ ಮಾಡ್ತಾ ಇಲ್ಲ ತಾನೇ? ಅಥವಾ ನೀನು ನನ್ನ ಕೈ ಜಾರಿ ಹೋದೆಯಾ? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟುತ್ತಾ ಇದೆ ಕಣೇ ಈ ಹಾಳು ಮನಸ್ಸಲ್ಲಿ ... ಅದಕ್ಕೆ ಧೈರ್ಯ ಮಾಡಿ ನನ್ನ ಮನಸ್ಸಿನ ಎಲ್ಲ ಭಾವನೆಗಳನ್ನು ಈ ಪತ್ರದಲ್ಲಿ ಬಿಚ್ಚಿಟ್ಟಿದ್ದೇನೆ ಇದನ್ನು ಓದಿ ನೀನು ನಿನ್ನ ಮನಸ್ಸಿನಲ್ಲಿ ಏನಿದೆ ಅ೦ತ ಹೇಳ್ತಿಯ ಅ೦ತ ಅ೦ದುಕೊ೦ಡಿದ್ದೇನೆ. ನನ್ನ ಈ ಪ್ರೀತಿಯ ಪತ್ರಕ್ಕೆ ನಿನ್ನ ಉತ್ತರ ನನ್ನ ಪರವಾಗಿರತ್ತೆ ಅ೦ತ ಆಸೆಯಿ೦ದ ಕಾಯ್ತಾ ಇರ್ತೀನಿ.ನಿನ್ನ ಉತ್ತರ ನನ್ನ ಪರವಾಗಿರಲಿ ಅ೦ತ ಗುಡಿಯೊಳಗಿರೋ ಆ ದೇವರಿಗೆ ಅರ್ಚನೆಯ ಲ೦ಚ ಬೇರೆ ಕೊಟ್ಟಿದ್ದೇನೆ. ಮರೆಯದೆ ಉತ್ತರ ಬರೆದು ಕಡಲೆ ಕಾಯಿ ಅಜ್ಜಿ ಹತ್ರ ಕೊಡು ...ನಿ೦ಗೆ ನನ್ನ ಕ೦ಡ್ರೆ ಇಷ್ಟ ಇಲ್ಲ ಅ೦ದ್ರೆ ಒ೦ದೇ ಒ೦ದು ಸಾರಿ ತಲೆ ಎತ್ತಿ ನಿನ್ನ ಆ ಮುಗುಳ್ನಗೆ ಬೀರಿ ನನಗೆ ಗುಡ್ ಬೈ ಹೇಳು ..ಆಮೇಲೆ ಯಾವತ್ತೂ ನಿನ್ನ ಕಣ್ಣಿಗೆ ಬೀಳಲ್ಲ ಕಣೇ.ಆದ್ರೆ ಯಾವ ಹುಡುಗಿಯ ನಗುವನ್ನೂ ನೋಡಲ್ಲ ... ಯಾರಿಗಾಗೂ ಕಾಯಲ್ಲ...!

Friday, August 20, 2010

This Is Competition...

Here is a glimpse of Competition...
This is a hoarding Jet Airways put at a busy road in Mumbai (Bandra Road).






Saturday, February 27, 2010

THE TALE OF A BACK BENCHER

No, matter what the teacher asks
I'm always at my own tasks,

Sitting on my last bench I always sleep
But when the exams come I always weep,

The teacher has come and he has gone
Sitting on my last bench I always yawn,

On my last bench come the sweetest dreams
But they always end when the teacher screams,

Looking at all this I sometimes try to dream
That one day I'll also sit at the front and become
the nation's cream.

Even then I will love this sorrowful trench
Because I'm writing this poem on the same last Bench,'

Thursday, February 11, 2010

Foxbat

October 23 1999, the dormitory inside the barracks had a deathly silence; suddenly the intercom started blaring “Jaanam samjha karo Jaanam samjha karo…” I along with the other 40 cadets woke-up with no other alternative...
It was 5:00 in the morning & for a week now this song was the only thing I had been hearing for the wake-up call. I cursed Anu Malik & Salman Khan; the noise was above 50 dB & the song would play incessantly until all the cadets assembled at 6:00 on the ground. I forced myself to get ready thinking all the while if I’m at the right place. By the time I reached the ground & took my place a small assembly was in place.

Squadron leader Oscar Das of Trisonics, was smiling looking at the assembly. The morning was gloomy with a slight drizzle which was strengthening with time. None of the 40 odd cadets seem to like the fact that they were made to stand in that weather. Oscar Das asked if we liked to begin the daily routine exercise. There was a uniform “No” in the air. Oscar Das said eh! Covering his right ear as if he had not heard us, this time around there was a muted “no sir”.

Oscar started: Do you think the armed forces stop if the weather is bad? I hate the attitude of the younger generation… now start running.
Thus started the 3 hour PT ordeal which would break for an hour at 9:00 AM for breakfast & continue till 1:00 PM. In the whole of the week I had run & exercised so much, which I had not done all my life until then.

The break for lunch at 1:00 was all were looking at, as that would be EOD for us. After lunch I along with other few cadets were roaming around looking at the aircrafts, and I saw her beautiful than any girl I ever had crush on, the legendary “Foxbat”, I got the opportunity to sit inside one… all my irritation & crib vanished & I felt this was ‘The Place’ I was inside a bird that was a Cold war legend!

Faster than fairies, faster than missiles. Flying 30 km above the earth in the stratosphere at nearly 3 mach, there was no missile that could shoot her down. She could see everything she wanted to, without being seen. The all-seeing AWACS dreaded her, for she flew far above its reach and could shoot it on the back.

She was invisible and invincible. She was MiG-25.

For long, her enemies did not even know her name. They thought she was MiG-23's new version, and even wrote so in secret despatches and books. Then they nicknamed her Foxbat. Who knows, many a UFO sighting in the Californian skies could be a MiG-25, still the world's fastest (save the American SR-71, which has been grounded), the highest-flying and the least photographed aircraft ever. The finest child of Soviet cold war ingenuity, she belongs to the world of legends and aviation folklore.

No missile could shoot her down; no plane could fly higher than she. But now, after nearly two decades of silent service-often without a mention in the official despatch-the Indian Air Force (IAF) bade goodbye to MiG-25s on May 1st 2006. The spares are scarce-even her original makers do not have them. Satellite imagery is replacing her cameras, another reason for the grounding.

By the time she had joined the IAF's Bareilly-based 102 squadron, in 1981, the MiG-25 had already become the world's most enigmatic plane. Flying her needed a test-pilot's skill-mere fighter pilots were no match.

Back to history: NATO air attaches watching the 1967 Air Force Day ceremony at Domodedovo airport outside Moscow were intrigued by the prototype of a twin-engine fighter plane parked amid a clutch of puny MiG-21s. None of them, all experienced air force officers, had ever seen such a huge jet-fighter. With a wingspan of 43 feet, length of 71 feet, and a height of 21 feet, she could not be concealed.

By evening, air intelligence officers in NATO capitals were exchanging secret notes. They did not know what sort of a plane the commies were making. They called her MiG-23 and nicknamed her Foxbat, hardly knowing that MiG-23 was just a step-sister of the famed MiG-21.

For the next many years, the Foxbat flew all over the European and American stratosphere but no one got wiser about her. Another myth was born: she was powered by a modified rocket engine, or a cruise missile engine.

One day in 1972, two Foxbats, piloted by Russians, took off from Egypt and flew at 2.5 mach over Sharm el Sheikh, teasing Israeli radars. The Israeli Air Force scrambled their best Phantoms, but even the radar blips were gone in no time. The event came to be recorded as one involving MiG-23s.

NATO commanders soon realised it was not the MiG-23 but one they had not heard of. In September 1976, they got a chance to dissect her and have a close look.

Victor Belenco, a defecting Soviet fighter pilot, burst into Japanese airspace on a Foxbat with fuel for just 60 seconds. He claimed Soviet fighters were on his tail. NATO engineers who rushed in ripped her apart and were amazed: parts were hand-weld. There was nickel in them instead of stainless steel. The best of NATO brains could not make out what they were looking at. Why, they could not even put them back. So when an angry' Moscow demanded their plane back, it had to be packed in containers and airlifted. (There are many who believe that the Soviets had engineered Belenco's defection to overawe the west with their superior technology.)

Belenco told his American hosts that Soviet commanders never allowed Foxbat pilots to fly her at speeds less than 2.5 mach. NATO pilots had never seen her because she mostly flew more than 24 km above the earth.

A few years later, a few Foxbats joined the IAF where men like Yuri, now a well-known radio jockey and managing director of FM radio company Green Channel, flew it.

Yuri, or Wing Commander Yogesh Suri, had already been a test pilot when he was sent to fly the superplane. "We reached Bareilly dying to have a look at the plane," he said. "We, pilots of supersonic fighters, behaved like children, threw suitcases into rooms and ran out to see the legend. The first flight had to be put off due to rains. Disappointed, we went round and round the plane in sheer awe. Even the cockpit ladder amazed us. So tall!"

Everything about the plane was out of the ordinary. "The commanding officer of the squadron was a group captain, two ranks above the usual squadron leader," said Yuri. "And squadron leaders made the squadron!"

Flying her, Yuri realised that the plane's performance exceeded the legends about it. "The sheer power of that climb into the stratosphere at mach 3! She alone could do it," he said. "And up there, we flew amid the stars. It's all black around, as in space. The cockpit walls are so high that you don't see the earth below. You feel alone, but peaceful. No other plane can give you that feeling. From Jodhpur to Adhampur, I have flown her in 30 minutes." Had luck favoured, Yuri could have been an astronaut instead of Rakesh Sharma: he was one of the four who had been trained to go to space.

Foxbat pilots have only one regret: they get no combat experience. There are no dogfights, no manoeuvres, for the plane does not encounter an enemy at that speed and height.

The IAF has its own Foxbat lore. In the late 1980s, the IAF reportedly sought, but was denied, Prime Minister Rajiv Gandhi's permission to fly over Islamabad. But as a serving air commander put it, "Who knows whether we flew or not? Even if we had, no one would have known."

In May 1997, a deafening noise rocked Islamabad. One Indian pilot was flying over the city when he broke the sound barrier at 65,000 feet. The Pakistan Air Force (PAF) first thought of scrambling their F-16s, then thought the better of it. For, no plane could reach anywhere near a Foxbat. PAF still believes that the IAF's Foxbat pilot deliberately broke the sound barrier to rub it into PAF minds that they had nothing that could get close to a MiG-25.

The MiG-25s embarrassed the US and British air forces in the 1991 Gulf war. In one incident, as wave after wave of F-14s and F-15s entered Iraqi airspace, escorted by A-6 and A-7 fighters, one Iraqi Foxbat took to the air, shot down an F-18, shot a missile at an A-6 and whizzed past another. Foxbats also saved the MiG-29s, which Iraqi President Saddam Hussein sent to Iran for safekeeping before the war broke out. The MiG-29s flew to safety while a few Foxbats engaged USAF's F-15s which tried to intercept the fleeing planes. The F-15s shot more than half a dozen missiles at the Foxbats, but the latter outflew all of them.

The closest look the Indian public got of her was when a Foxbat crashed near Pathankot in 1998 due to a technical defect. Now, some of the grounded aircraft may be exhibited in museums.

MiG-25 may have flown into history. But her pilots will remember the sense of being invisible she gave them, Forever.

Wednesday, February 03, 2010

Kannada Links

ಕನ್ನಡ ದಿನಪತ್ರಿಕೆಗಳುಚಿತ್ರ ವಾರ್ತೆಕನ್ನಡ ನಿಯತಕಾಲಿಕೆಗಳುಕನ್ನಡ ಪೋರ್ಟಲ್ ಗಳು
ಈ ಸಂಜೆಇಂಡಿಯಾ ಗ್ಲಿಟ್ಸ್ ಕನ್ನಡದಿ ಸಂಡೇ ಇಂಡಿಯನ್ಕನ್ನಡ ಗ್ರೀಟಿಂಗ್ಸ್
ಉದಯವಾಣಿಕನ್ನಡ ಗಲಟ್ಟಮಯೂರಕರ್ನಾಟಕ ರಕ್ಷಣಾ ವೇದಿಕೆ
ಕನ್ನಡಪ್ರಭಗಂಧದ ಗುಡಿವಿಕ್ರಾಂತ ಕರ್ನಾಟಕಕೆಂಡ ಸಂಪಿಗೆ
ಪ್ರಜಾವಾಣಿಚಿತ್ರ ರಂಗಸುಧಾದಟ್ಸ್ ಕನ್ನಡ
ವಿಜಯ ಕರ್ನಾಟಕಚಿತ್ರಲೋಕಪ್ರಕಾಶಕ
ಸಂಜೆವಾಣಿವಿಗ್ಗಿ ಡಾಟ್ ಕಾಮ್ಬಾನುಲಿ
ವಿಶ್ವ ಕನ್ನಡ
ಕನ್ನಡ ಸಾಮಗ್ರಿಕನ್ನಡ ಹಾಡುಗಳುವಿಸ್ಮಯ ನಗರಿ
ಕನ್ನಡ ಕನ್ನಡಿಗ ಎಲ್ಲಾ ಕವಿ ಬಳಗಇಂಡಿಯಾ ವಿಲಾಸ್ವೆಬ್ ದುನಿಯ ಕನ್ನಡ
ಕನ್ನಡ ಕಸ್ತೂರಿ ನಿಘಂಟುಇನ್ನೊಂದು ರೇಡಿಯೋಸಂಪದ
ಕನ್ನಡ ಗ್ರೀಟಿಂಗ್ಸ್ಉದ್ಭವಸುಮ್ನೆ
ಕನ್ನಡ ಟ್ಯೂಬ್ಕನ್ನಡ ಅಂತರ್ಜಾಲ ರೇಡಿಯೋmsn ಕನ್ನಡ
ಕನ್ನಡ ಲೋಕಕನ್ನಡ ಆಡಿಯೋsify ಕನ್ನಡ
ಕನ್ನಡ ಸಾಹಿತ್ಯ ಡಾಟ್ ಕಾಮ್ಕನ್ನಡ ರೇಡಿಯೋyahoo ಕನ್ನಡ
ಟೋಟಲ್ ಕನ್ನಡಕನ್ನಡ ಹಾಡುಗಳು
ನಮ್ಮ ಕರ್ನಾಟಕಮ್ಯೂಸಿಕ್ ಇಂಡಿಯಾ ಆನ್ ಲೈನ್
ಪ್ರಕಾಶಕರೇಡಿಯೋ
ಬರಹರೇಡಿಯೋ ಮುಸಿಕ್ ಇಂಡಿಯಾ
ಮೈ ಕನ್ನಡಸಂಗೀತ ಜಗತ್ತು
ವಿಕಿಪಿಡಿಯಾ
ವೀಡಿಯೋ ಬ್ಲಾಗ್
ಸ್ಯಾಂಡಲ್ ವುಡ್ ಟಿವಿ
ಕನ್ನಡದ ಬ್ಲಾಗುಗಳು
ಅಂತರಂಗವೆಬ್ ದುನಿಯಾ ಕನ್ನಡಭಾವನೆಗಳ ಅಲೆಯೊಳಗೆ ನಾವು ನೀವುನಿರೀಕ್ಷಿತ ಅನೀರಿಕ್ಷಿತ
ಅಕ್ಷರ ಪಾತ್ರೆಶಾನಿಯ ಡೆಸ್ಕಿನಿಂದಮಂಜು ಮಸುಕಿದ ದಾರಿನೀ ಮಾಯೆಯೊಳಗೋ
ಅಗಸೆಯ ಅಂಗಳಶ್ಯಾಮ್ ಕಿಶೋರ್ ಮನದ ಮಾತುಮಜಾವಾಣಿನೂರೆಂಟು ಸುಳ್ಳು
ಅಚ್ಚ ಕನ್ನಡಶ್ರೀ ಮನೆಮತ್ತೊಂದಾಸ್ಯನೆನಪು ಕನಸುಗಳ ನಡುವೆ
ಅಡಿಗರ ಪುಟಗಳುಶ್ರೀನಿಧಿಯ ಪ್ರಪಂಚಮತ್ತೊಂದಾಸ್ಯನೋವು ನಲಿವುಗಳ ಸಂಗಮದಲ್ಲಿ
ಅದು ಇದುಶ್ರೀನಿವಾಸಮನಕ್ಕೆ ನೆನಹಾಗಿಪಂಚಮುಖಿಯ ಕಥೆಗಳು
ಅನಂತಮೂರ್ತಿಯವರ ಋಜುವಾತುಸಂಜೆಯ ರಾಗಕೆಮನದ ಮಾತುಪಂಚ್ ಲೈನ್
ಅನಿವಾಸಿಸಕಲಮನದಾಳದ ಮಾತುಪಟ್ಟಾಂಗ
ಅನುರಾಗಸುನಿಲ್ ಜಯಪ್ರಕಾಶ್ಮನಸು ಮಾತಾಡ್ತಿದೆಪರಿವೇಷನ
ಅನೂಜ್ಞಸೃಜನ ಕನ್ನಡಿಗಮನಸ್ವಿನಿಪವನಜ
ಅಪಾರಹಂಗ ಸುಮ್ನ್ಮನಸ್ಸಿನ ಪುಟಗಳ ನಡುವೆಪಾತರಗಿತ್ತಿ ಪಕ್ಕ
ಅಪಾರ್ಥಕೋಶಹಜಾಮನ ಹರಟೆಮನಸ್ಸಿನ್ಯಾಗೊಂದು ಮನಸ್ಸುಪಿಚ್ಚರ್
ಅಬ್ದುಲ್ ರಶೀದರ ಮೈಸೂರ್ ಪೋಸ್ಟ್ಹರಿಣಿ ಕಾರ್ಟೂನ್ಸ್ಮಲೆಯ ಮಾತುಪೋಲಿ ಮನೆ
ಅಮೃತ ಸಿಂಚನಹರಿವ ಲಹರಿಮಾನಸ ಸರೋವರಪೋಲಿ ಹುಡುಗ
ಅಮೇರಿಕಾದಿಂದ ರವಿಹರ್ಷ ಚರಿತ್ರೆಮಾವಿನಯನಸಪ್ರತಿಕ್ರಿಯೆ
ಅಮೇರಿಕೆಯಿಂದ ಅವಲೋಕಿಸುತ್ತಹಾಲಮೃಗನಯನೀಪ್ರತಿಬಿಂಬ
ಅರಳೀ ಕಟ್ಟೆಹುಚ್ಚು ಮನಸ್ಸಿನ ಹತ್ತು ಮುಖಗಳು

Abroad 2864

People Pay for adventure rides... when the most exiting are absolutely free!


Tuesday, January 19, 2010

ಬದಲಾಗುವುದೆಂದರೆ ಅರ್ಧರಾತ್ರಿಯಲ್ಲಿ ಮನೆ ಬಿಡುವುದಾ?

ಯಾರಿಗೂ ಪುರುಸೊತ್ತಿಲ್ಲ. ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಯೇ ಕಳೆದು ಹೋಗಿದ್ದಾರೆ. ಕಳೆದು ಹೋಗುವ ಅನಿವಾರ್ಯತೆಯನ್ನು ನಮಗೆ ನಾವೇ ಸೃಷ್ಟಿಸಿಕೊಂಡಿದ್ದೇವೆ. ಅಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳೆಯರು -ಹೀಗೆ ಆತ್ಮೀಯರ ಜತೆ ನಾಲ್ಕು ಮಾತಿಗೆ ಬಿಝಿ ಷೆಡ್ಯೂಲ್‌ನಲ್ಲಿ ಸಮಯ ಹೊಂದಿಸಿಕೊಳ್ಳಲು ತಿಣುಕಾಡಬೇಕಾಗಿದೆ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹಳ್ಳಿ ಹುಡುಗ, ಆರಂಭದಲ್ಲಿ ಊರಿಗೆ ವಾರಕ್ಕೊಮ್ಮೆ ಹೋಗುತ್ತಿದ್ದ. ನಂತರ ಎರಡು ವಾರಕ್ಕೊಮ್ಮೆ, ಆಮೇಲೆ ತಿಂಗಳಿಗೊಮ್ಮೆ. ಅಮೇಲಾಮೇಲೆ ಮೂರು ತಿಂಗಳಿಗೊಮ್ಮೆ. ಕೊನೆಕೊನೆಗೆ ವರ್ಷಕ್ಕೊಂದು ಸಲ. ಮದುವೆಯಾದ ಮೇಲೆ ಊರು ಎಲ್ಲಿದೆ ಎಂಬುದೇ ಆತನಿಗೆ ನೆನಪಾಗುತ್ತಿಲ್ಲ. ಪ್ರತಿ ಶ್ರಾವಣ ಶನಿವಾರ ಮನೆ ದೇವರ ದೇಗುಲಕ್ಕೆ ಹೋಗುವುದನ್ನು ಆತ ತಪ್ಪಿಸುತ್ತಿರಲಿಲ್ಲ. ಆದರೀಗ ಮನೆ ದೇವರು ಸಹ ದೂರ.
‘ಬೆಂಗಳೂರಿನಂಥ ಮಾಯಾನಗರಿಗಳು ಎಲ್ಲರನ್ನೂ ಕರೆಕರೆದು ಕೆಲಸ ಕೊಡುತ್ತವೆ. ಈ ಮಾಯಾನಗರಿಯ ಸೆಳೆತದಲ್ಲಿ ವ್ಯತ್ಯಾಸಗಳೇ ಕಾಣಿಸುವುದಿಲ್ಲ. ನಮ್ಮತನವೇ ಸವೆದು ಹೋಗಿರುತ್ತದೆ. ಎಲ್ಲರಿಗೂ ಒಂದೇ ಸಮವಸ್ತ್ರ. ಒಂದೇ ಕೆಲಸ. ಭಾವನೆಗಳೇ ಇಲ್ಲದ ಯಾಂತ್ರಿಕ ಬದುಕು’ ಎಂದು ಹೇಳಲು ಹೊರಟರೆ, ಅದೇ ಹಳೆಯ ಕೊರಗು ಎನ್ನುವಿರೇನೋ?
ಗಂಡ ಹೆಂಡತಿ ಜತೆ, ಮಕ್ಕಳು ಹೆತ್ತವರ ಜತೆ ಇಮೇಲ್‌ನಲ್ಲಿ, ಎಸ್‌ಎಂಎಸ್‌ಗಳಲ್ಲಿ ಮಾತಾಡುವ ಕಾಲವಿದು. ಮಗನ ಹುಟ್ಟುಹಬ್ಬವನ್ನು ಮೊಬೈಲ್ ನೆನಪಿಸುತ್ತದೆ. ಕೂಡಲೇ ಕರೆ ಮಾಡಿ, ಮಗನಿಗೆ ಹೂಗುಚ್ಛ ತಲುಪುವಂತೆ ಅಪ್ಪ ವ್ಯವಸ್ಥೆ ಮಾಡುತ್ತಾನೆ. ಹುಟ್ಟಿದ ಹಬ್ಬದ ದಿನವಾದರೂ ನನ್ನ ಜತೆ ಅಪ್ಪ ಕಾಲ ಕಳೆಯುತ್ತಾನೆ ಎಂದು ಭಾವಿಸುವ ಮಗನಿಗೆ, ಆ ದಿನವೂ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಯಾವುದೋ ಎಮರ್ಜೆನ್ಸಿ ಮೀಟಿಂಗ್, ಮುಗಿಯದ ಪ್ರಾಜೆಕ್ಟ್, ತಲೆತಿನ್ನುವ ಕೆಲಸಗಳು ಭಾವನೆಗಳನ್ನು ತಣ್ಣಗೆ ಕೊಲ್ಲುತ್ತದೆ.
ಮ್ಯಾನೇಜ್‌ಮೆಂಟ್ ಕಾಕದೃಷ್ಟಿ ತಪ್ಪಿಸಿಕೊಳ್ಳಲು ಗಾಣದ ಎತ್ತಿನಂತೆ ದುಡಿಯಲೇ ಬೇಕು. ಮಲ್ಯನ ರೇಸ್ ಕುದುರೆಗಳಂತೆ ದಣಿವನ್ನು ಮರೆತು ಓಡಲೇ ಬೇಕು. ಗುರಿಯಿಲ್ಲದ ಈ ಓಟ, ನಿರಂತರ. ಸ್ವಲ್ಪ ಏರುಪೇರಾದರೂ ಕೆಲಸಕ್ಕೆ ಕತ್ತರಿ. ಈಗಿನದು ಊರಿಗೆ ನೂರಾರು ಪದ್ಮಾವತಿಯರ ಕಾಲ. ನಮ್ಮ ಕುರ್ಚಿ ಅಲಂಕರಿಸಲು ದೊಡ್ಡದೊಂದು ಕ್ಯೂ ಆಗಲೇ ಹನುಮಂತಪ್ಪನ ಬಾಲದಂತೆ ಬೆಳೆದು ನಿಂತಿದೆ.
ಜಗದ ಸಂಕಷ್ಟಗಳನ್ನು ಅವುಗಳ ಪಾಡಿಗೆ ಬಿಟ್ಟು, ಎಲ್ಲವನ್ನೂ ಮರೆತು, ನಮಗೆ ಬೇಕಾದವರೊಂದಿಗೆ ಹೋಟೆಲ್‌ನಲ್ಲಿ ಕೂತು ಕಾಫಿ ಹೀರಿದ್ದು ಯಾವಾಗ? ಯಾವುದೋ ಪಾರ್ಕ್‌ನಲ್ಲಿ, ನಮ್ಮದೇ ಮೆಚ್ಚಿನ ತಾಣಗಳಲ್ಲಿ ಕೂತು ಅವರೊಂದಿಗೆ ನೆನಪುಗಳನ್ನು ಕೆದಕಿದ್ದು ಯಾವಾಗ? ಯಾವುದೋ ಮರೆತ ಹಳೆಯ ಹಾಡನ್ನು ತಪ್ಪು ತಪ್ಪಾಗಿಯೇ ಗುನುಗಿ, ಮಧುರಾನುಭೂತಿ ಹೊಂದಿದ್ದು ಯಾವಾಗ? ನೆನಪುಗಳು ತಿಂಗಳುಗಳನ್ನು ದಾಟಿ ವರ್ಷಗಳನ್ನು ಎಣಿಸುತ್ತವೆ.
ಅವನೆಲ್ಲೋ ಇವನೆಲ್ಲೋ? ಭೇಟಿ ನೆಪದಲ್ಲಿ ದೂರದ ಗೆಳೆಯ ಊರಿಗೆ ಬಂದರೂ ನಮಗೆ ಸಿಗುವುದೇ ಇಲ್ಲ. ಕನಸಲ್ಲಿ ಬಂದಂತೆ ಮಿಂಚಿ ಮಾಯವಾಗುತ್ತಾನೆ. ಊರಿಗೆ ಬಂದರೂ ಸೆಲ್‌ನಲ್ಲಿಯೇ ಆತ ಹೆಚ್ಚಾಗಿ ಸಿಗುತ್ತಾನೆ. ನೇರ ಸಿಕ್ಕರೂ ಸೆಲ್‌ನಲ್ಲಿಯೇ ಇರುತ್ತಾನೆ. ಯಾರಿಗೋ ಎಸ್ಸೆಮ್ಮೆಸ್‌ಗಳನ್ನು ಒಂದರ ನಂತರ ಒಂದರಂತೆ ಕಳುಹಿಸುತ್ತಾ, ನಾವು ಹೇಳಿದ್ದಕ್ಕೆ ತಲೆಯಾಡಿಸುತ್ತಿರುತ್ತಾನೆ! ಅವನು ಪಕ್ಕದಲ್ಲಿದ್ದರೂ, ದೂರದಲ್ಲಿದ್ದಂತೆ ಭಾವ. ಹಾಕಿಕೊಂಡಿದ್ದ ಯೋಜನೆಗಳು ಯಥಾ ಪ್ರಕಾರ ಮುಂದಿನ ಭೇಟಿಗೆ ವರ್ಗವಾಗುತ್ತವೆ. ಕೊನೆಗೆ ಊರು ಬಿಡುವ ವಿಷಯ ಸಹ ತಿಳಿಯುವುದಿಲ್ಲ.
ಒಂದೆರಡು ದಿನಗಳ ನಂತರ ಫೋನಲ್ಲಿಯೇ ‘ಅದೇನಾಯ್ತು ಅಂದ್ರೆ..’ ಎಂದು ಆತ ನೆಪಗಳನ್ನು ಜೋಡಿಸಲು ಶುರು ಮಾಡುತ್ತಾನೆ. ಅವುಗಳನ್ನು ಒಪ್ಪದೇ ಅಥವಾ ನಂಬದೇ ಬೇರೆ ದಾರಿಯಾದರೂ ನಮಗಿದೆಯೇ?‘ಚಿಕ್ಕ ಕನಸುಗಳನ್ನು ಕಾಣುವುದು ಅಪರಾಧ ’ ಎಂದು ಎಲ್ಲೋ ಕೇಳಿದ ಮಾತು ತಲೆಯಲ್ಲಿ ಉಳಿದಿರುತ್ತದೆ. ‘ ನನಗೆ ಆಸೆಗಳಿಲ್ಲ. ತಿಂಗಳಿಗೆ ಕೇವಲ ೫೦೦೦ ರೂಪಾಯಿ ಸಿಕ್ಕರೆ ಸಾಕು. ನಾನು ಆನಂದದ ಬದುಕು ಕಟ್ಟಿಕೊಳ್ಳುತ್ತೇನೆ’ ಎನ್ನುತ್ತಿದ್ದ ಗೆಳೆಯನ ಸಂಬಳ ಈಗ ೫೦ ಸಾವಿರ. ಆದರೂ ಆತನಿಗೆ ಸಮಾಧಾನ ಇಲ್ಲ. ಸೈಕಲ್ ಸಾಕು ಎನ್ನುತ್ತಿದ್ದವಗೆ ಸ್ಕೂಟರ್ ಸಿಕ್ಕಿದೆ. ರಸ್ತೆಯಲ್ಲಿ ನಿಂತು, ಕಾರಿನ ಕನಸು ಕಂಡವನ ಮನೆಯಲ್ಲಿ ಎರಡೆರಡು ಕಾರುಗಳಿವೆ. ‘ಮಗಳ ಮದುವೆ ಮುಗಿದರೆ ನಾನು ಪುನೀತ. ತಲೆಮೇಲಿನ ಹೊರೆ ಇಳಿಸಿಕೊಂಡು ಹಗುರಾಗುತ್ತೇನೆ’ ಎನ್ನುತ್ತಿದ್ದ ಯಜಮಾನರು, ತಮ್ಮ ಮೊಮ್ಮಗಳಿಗೂ ಮದುವೆ ಮಾಡಿದ್ದಾರೆ. ಆದರೂ ಇವರ‍್ಯಾರಲ್ಲೂ ಸಂತೋಷ ಕೆನೆಕಟ್ಟಿಲ್ಲ.
‘ಆನಂದವನ್ನು ಬಿಟ್ಟು ನಾವು ಸುಖದ ಬೆನ್ನತ್ತಿರುವುದರಿಂದಲೇ ಹೀಗಾಗುತ್ತಿದೆ. ಆನಂದ ನೀಡುವ ಮೇಷ್ಟ್ರು ಕೆಲಸದತ್ತ ಯಾರಿಗೂ ಆಸಕ್ತಿಯಿಲ್ಲ. ಎಲ್ಲರಿಗೂ ಸಾಫ್ಟ್‌ವೇರ್ ಎಂಜಿನಿಯರ್ ಆಗುವ ಹಂಬಲ ಹೆಚ್ಚುತ್ತಿದೆ’ ಎನ್ನುವ ಟಿ.ಎನ್.ಸೀತಾರಾಂ ಮಾತು, ಇಲ್ಲಿ ಸುಮ್ಮನೇ ನೆನಪಾಗುತ್ತಿದೆ. ಮನೆ ಹತ್ತಿರದ ೭ ವರ್ಷದ ಪುಟಾಣಿ ಬಾಲಕಿಯನ್ನು ಮೊನ್ನೆ ಮಾತಾಡಿಸಿದೆ. ‘ದೊಡ್ಡವಳಾದ ಮೇಲೆ ಏನಾಗುತ್ತೀಯಾ?’ ಎಂಬ ಪ್ರಶ್ನೆಗೆ, ತಡವರಿಸದೇ ‘ಡಾಕ್ಟರ್ ಆಗ್ತೀನಿ ಅಂಕಲ್’ ಎಂದಳು. ‘ಯಾಕೆ?’ ಎಂದರೆ, ‘ಚೆನ್ನಾಗಿ ದುಡ್ಡು ಸಂಪಾದಿಸುವುದಕ್ಕೆ’ ಅಂದಳು. ದೊಡ್ಡವರ ದುಡ್ಡಿನ ಮೋಹ ಮಕ್ಕಳ ರಕ್ತದಲ್ಲಿಯೂ ಬೆರೆಯುತ್ತಿದೆಯೇ? ಈ ಮಧ್ಯೆ ಮದುವೆಗೆ ಬಾರದಿದೆಕ್ಕೆ ಗೆಳೆಯನೊಬ್ಬನಿಗೆ ನಾನು ಫೋನ್‌ನಲ್ಲಿ ವಿವರಣೆ ಕೊಡುತ್ತಿದ್ದೆ. ‘ಮದುವೆಗೆ ನೀನು ಬರಲಿಲ್ಲ ಎಂದು ನನಗೆ ಬೇಸರವಿಲ್ಲ. ಅಲ್ಲದೇ ನೀನು ಮದುವೆಗೆ ಬಂದೇ ನಮ್ಮಿಬ್ಬರ ಸ್ನೇಹವನ್ನು ಗಟ್ಟಿಗೊಳಿಸಬೇಕಿತ್ತು ಎಂದು ನಾನು ಭಾವಿಸಿಲ್ಲ. ಹೊಟ್ಟೆಪಾಡಿನ ಸರ್ಕಸ್ ಇದ್ದದ್ದೇ. ಕೆಲವು ಸಲವಾದರೂ ಅನಿವಾರ್ಯತೆಯ ಭೂತದಿಂದ ನಾವು ತಪ್ಪಿಸಿಕೊಳ್ಳಬೇಕು. ನೋಟಿನ ಮಸಿ ಕೈಗೆ ಅಂಟಿದರೆ ಪರವಾಗಿಲ್ಲ. ಮುಖಕ್ಕೆ ಅಂಟಬಾರದು. ನನ್ನ ಮದುವೆ ವಿಷಯ ಬಿಡು, ಅದೇನು ಲೋಕ ಕಲ್ಯಾಣದ ಕಾರ್ಯಕ್ರಮವಲ್ಲ ’ ಎಂದು ಹೇಳಿ ಪೋನ್ ಕೆಳಗಿಟ್ಟ.

Wednesday, January 13, 2010

The Strange Sound

A man is driving down the road and breaks down near a monastery.
He goes to the monastery, knocks on the door, and says, My car broke down. Do you think I could stay the night?
The monks graciously accept him, feed him dinner, and even fix his car. As the man tries to fall asleep, he hears a strange sound. The next morning, he asks the monks what the sound was, but they say,
"We can't tell you. You're not a monk."
The man is disappointed but thanks them anyway and goes about his merry way.
Some years later, the same man breaks down in front of the same monastery.
The monks again accept him, feed him, and even fix his car.
That night, he hears the same strange noise that he had heard years earlier.
The next morning, he asks what it is, but the monks reply,
"We can't tell you. You're not a monk."
The man says, All right, all right. I'm dying to know. If the only way I can find out what that sound was, is to become a monk, how do I become a monk?
The monks reply:
"You must travel the earth and tell us how many blades of grass there are and the exact number of sand pebbles. When you find these numbers, you will become a monk."
The man sets about his task. Some forty-five years later, he returns and knocks on the door of the monastery. He says, I have traveled the earth and have found what you have asked for. There are 145,236,284,232 blades of grass and 231,281,219,999,129,382 sand pebbles on the earth.
The monks reply:
Congratulations. You are now a monk. We shall now show you the way to the sound. The monks lead the man to a wooden door, where the head monk says, The sound is right behind that door. Th e man reaches for the knob, but the door is locked. He says, Real funny. May I have the key? The monks give him the key, and he opens the door.
Behind the wooden door is another door made of stone.
The man demands the key to the stone door.
The monks give him the key, and he opens it, only to find a door made of ruby.
He demands another key from the monks, who provide it.
Behind that door is another door, this one made of sapphire.
So it went until the man had gone through doors of emerald ...
...silver, topaz, and amethyst.
Finally, the monks say:
"This is the last key to the last door."
The man is relieved to no end. He unlocks the door, turns the knob, and behind that door he is amazed to find the source of that strange sound.
.
.
.
...But I can't tell you what it is because you're not a monk.

What Google Knows About You

If online privacy spooks you, take a look at What Google Knows About You.
Recently Google released Google Dashboard which tells you
"what Google knows about you".
The dashboard lists some of the information associated with the Google services you use: your name, your email address, the number of contacts, the number of conversations in your Gmail inbox, your Google profile, the most recent entries from the web history etc.
It's a long answer to the question:
"What does Google know about me?".If you have a Google account, you can login to Google Dashboard and you are presented with pretty much everything having to do with Google. This is actually a pretty useful tool as it gives you a gateway all of your Google services. This is also a great tool for the paranoid because you can see what Google lets you know they know about you.

Here's the URL yo the article http://www.pcmech. com/article/ see-what- google-knows- about-you/

Vanilla Ice Cream that puzzled General Motors

A complaint was received by the Pontiac Division of General Motors:
'This is the second time I have written to you, and I don't blame you for not answering me, because I sounded crazy, but it is a fact that we have a tradition in our family of Ice-Cream for dessert after dinner each night, but the kind of ice cream varies so, every night, after we've eaten, the whole family votes on which kind of ice cream we should have and I drive down to the store to get it. It's also a fact that I recently purchased a new Pontiac and since then my trips to the store have created a problem... You see, every time I buy a vanilla ice-cream, when I start back from the store my car won't start. If I get any other kind of ice cream, the car starts just fine. I want you to know I'm serious about this question, no matter how silly it sounds. What is there about a Pontiac that makes it not start when I get vanilla ice cream, and easy to start whenever I get any other kind?"
The Pontiac President was understandably skeptical about the letter, but sent an Engineer to check it out anyway. The latter was surprised to be greeted by a successful, obviously well educated man in a fine neighborhood. He had arranged to meet the man just after dinner time, so the two hopped into the car and drove to the ice cream store. It was vanilla ice cream that night and, sure enough, after they came back to the car, it wouldn't start. The Engineer returned for three more nights. The first night, they got chocolate. The car started. The second night, he got strawberry. The car started. The third night he ordered vanilla. The car failed to start. Now the engineer, being a logical man, refused to believe that this man's car was allergic to vanilla ice cream. He arranged, therefore, to continue his visits for as long as it took to solve the problem. And toward this end he began to take notes: He jotted down all sorts of data: time of day, type of gas uses, time to drive back and forth etc. In a short time, he had a clue: the man took less time to buy vanilla than any other flavor. Why? The answer was in the layout of the store. Vanilla, being the most popular flavor, was in a separate case at the front of the store for quick pickup. All the other flavors were kept in the back of the store at a different counter where it took considerably longer to check out the flavor. Now, the question for the Engineer was why the car wouldn't start when it took less time. Eureka - Time was now the problem - not the vanilla ice cream!!!! The engineer quickly came up with the answer: "vapor lock". It was happening every night; but the extra time taken to get the other flavors allowed the engine to cool down sufficiently to start. When the man got vanilla, the engine was still too hot for the vapor lock to dissipate. Even crazy looking problems are sometimes real and all problems seem to be simple only when we find the solution, with cool thinking.

Sunday, August 09, 2009

ಮದುವೆ ಯಾವಾಗ ...?

ಮದುವೆ ಯಾವಾಗ ...?ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ ,ಏನೋ ಒ೦ತರ ಹೊಟ್ಟೆ ಉರಿ ಇವರಿಗೆ.ಈ ಮದುವೆ ಅನ್ನೋದೇ ಇಷ್ಟು,ಆದವರು ಅಯ್ಯೋ ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ,ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ.ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ ಹೋಗಿದೆಯೇನೋ ಅನ್ಸತ್ತೆ .ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ,ವಯಸ್ಸಾಗಿದೆ ಅ೦ತ.ಆದ್ರೆ ಏನು ಮಾಡೋದು?,ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕೇ ಇಲ್ಲ.ಹಾಗೇನಾದ್ರೂ ಸಮಯ ಸಿಕ್ಕಿದರೂ ಮುಖದಲ್ಲಿರೋ ಸುಕ್ಕುಗಳನ್ನು,ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು ತಾಳ್ಮೆನೂ ಇಲ್ಲ.ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ.ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ.ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ !!!ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ.ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ.ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಬಾಗ್ಯ ಸಿಗತ್ತೆ .ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಪಡ್ತಾರೋ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇರಲು ಹರಸಾಹಸ ಮಾಡ್ತೀನಿ.ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು.ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ.ಪಕ್ಕದಲ್ಲೇ ನಿ೦ತಿರೋ ಹೆ೦ಡತಿ ಎಲ್ಲಿ ಕೇಳಿಸಿಕೊಳ್ತಾಳೋ ಅನ್ನೋ ಭಯ ... ಅದನ್ನು ನೋಡಿ ಏನೋ ಒ೦ತರ ಖುಷಿ ನ೦ಗೆ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರ್ದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ,ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ, ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ .ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು,ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು,ಆಗಾಗ ಮೈ ಕೈ ನೋಯಿಸಿಕೊಳ್ಳೋದು,ಟೈಮ್ ಸರಿದೂಗಿಸಲಾಗದೆ ಒದ್ದಾಡೋದು ....ಈ ಹೊಟ್ಟೆ ಕರಗಿಸಕ್ಕೆ ಇಲ್ಲದ ಪಾಡು ಪಡೋದು.ಈ ಹೊಟ್ಟೆ ಅನ್ನೋದು ಪ್ರಾಣಿಗಳಿಗೆ ಬರತ್ತಾ? ಈ ಪ್ರಶ್ನೆ ಆಗಾಗ ಕಾಡ್ತಾ ಇರತ್ತೆ.ಆದ್ರೆ ಅವು ಯಾವಾಗಲು ಬ್ಯುಸಿ ಆಗಿರುತ್ತವೆ.ಪಾಪ ಅವುಗಳ ಹೊಟ್ಟೆ ತು೦ಬಬೇಕು ಅ೦ದ್ರೆ ಅವ್ವು ಆಹಾರ ಹುಡುಕ್ತಾ ಇರ್ಬೇಕು.ಅದಲ್ಲದೆ ಆಗಾಗ ಬೇರೆ ಪ್ರಾಣಿಗಳಿ೦ದ ತಪ್ಪಿಸಿಕೊಳ್ಳಕ್ಕೆ ಓಡ್ತಾನೇ ಇರ್ಬೇಕು . ಇನ್ನು ಹೊಟ್ಟೆ ಎಲ್ಲಿ೦ದ ಬರಬೇಕು?ಅದೇನಿದ್ದರೂ ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ ಮಾತ್ರ ಬರೋದು ಈ ದರಿದ್ರ ಹೊಟ್ಟೆ.ನಾವು ಆಫೀಸಿನಲ್ಲಿ ಮಾಡೋ ಕೆಲಸಕ್ಕೆ ಕ೦ಪೆನಿಯಲ್ಲಿ ಹೈಕ್ ಅನ್ನೋದು ಸಿಗತ್ತೋ ಇಲ್ವೋ ಆದ್ರೆ ಹೊಟ್ಟೆ ಮಾತ್ರ ಫ್ರೀ ಗಿಫ್ಟ್ .ಒ೦ದು ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ,ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ.ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ.ಅಯ್ಯೋ ಪಾಪಿ ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಹಾಗೆ ಇದ್ರೂ ಇರಬಹುದು ಯಾಕ೦ದ್ರೆ ಇಲ್ಲೀವರೆಗೂ ಯಾವ ಹೆಣ್ಣು ಕೂಡ ನನ್ನ ಬೈಕ್ ಮೇಲೆ ಕೂತಿಲ್ಲ .ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!!ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ.ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ.ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ (ನನ್ನ ಈ ಹಾಲಿವುಡ್ ಫೇಸ್ ಕಟ್ ಗೆ ಯಾರೂ ಒಲಿದಿಲ್ಲ ಅನ್ನೋದು REALITY).ಆಗಾಗ ORKUT ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು(Friends Request)ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಪಲಿತಾ೦ಶ ಸೊನ್ನೇನೆ ..ಆಗಾಗ ಮನಸ್ಸಿನಲ್ಲಿ ಒ೦ದು ಲೆಕ್ಕಾಚಾರ ನಡಿತಾ ಇರತ್ತೆ.ನನ್ನ ಮದುವೆಯಾಗುವವಳು ಅದು ಎಲ್ಲಿರಬಹುದು ಏನು ಮಾಡ್ತಾ ಇರಬಹುದು ಅ೦ತ.ಅವಳು ಕೂಡ ನನ್ನ ಬಗ್ಗೆ ಯೋಚನೆ ಮಾಡ್ತಾ ಇರಬಹುದೋ ಏನೋ ? ಅವಳು ಕೂಡ ನನ್ನ ತರ ಮು೦ಗೋಪಿಯಾಗಿದ್ದರೆ ? ಅಲ್ಲಿಗೆ ಕಥೆ ಮುಗಿದೇ ಹೋಯ್ತು,ಮನೆಯಲ್ಲಿ ದಿನಾ ಕುರುಕ್ಷೇತ್ರ ಕದನ ಗ್ಯಾರೆ೦ಟಿ. ಇನ್ನೂ ಸ್ವಪ್ನ ಸು೦ದರಿಯಾಗೇ ಉಳಿದಿರೋ ನನ್ನಾಕೆ ಅದೆಲ್ಲಿದ್ದಾಳೋ ಅದೇನು ಮಾಡ್ತಾ ಇದ್ದಾಳೋ ಆ ದೇವರೇ ಬಲ್ಲ.ದೇವರು ಎಲ್ಲರಿಗೂ ಒಬ್ಬರು ಅ೦ತ ಜೋಡಿ ಮಾಡಿರ್ತಾನ೦ತೆ. ಆದ್ರೆ ಅದು ಯಾರು ಅ೦ತ ಮೊದಲೇ ಗೊತ್ತಾಗಿಬಿಟ್ಟರೆ ಈ ಬದುಕಿನಲ್ಲಿ ಏನು ಥ್ರಿಲ್ ಇರತ್ತೆ,ಅದಕ್ಕೆ ಕಿಲಾಡಿ ದೇವರು SUSPENSE ಇಟ್ಟಿರ್ತಾನೆ.ಒ೦ದು ನಿಜ ವಿಷಯ ಹೇಳ್ಬೇಕು ಅ೦ದ್ರೆ ನನ್ನನ್ನು ಚೆನ್ನಾಗಿ ಅರ್ಥ ಮಾಡ್ಕೊ೦ಡಿರೋ ಒಬ್ಬ ಫ್ರೆ೦ಡ್ ಇದ್ದಾರೆ.ನನ್ನ ಮನಸ್ಸಿಗೆ ತಕ್ಕ೦ತೆ ಅವರು ಹೊ೦ದಿಕೊಳ್ತಾರೆ.ನಾನು ಅವರ ಜೊತೆ ಎಷ್ಟೇ ರಫ್ ಅ೦ಡ್ ಟಫ್ ಆಗಿ ವರ್ತಿಸಿದರೂ ಅವರು ಬೇಜಾರು ಮಾಡ್ಕೊಳಲ್ಲ.ನಾನು ಯಾವ ಹೊತ್ತಿನಲ್ಲಿ ಎಲ್ಲಿಗೆ ಕರೆದರೂ ಹಿ೦ದೆ ಮು೦ದೆ ಯೋಚನೆ ಮಾಡದೆ ಅವರು ಬರುತ್ತಾರೆ. ಅವರು ನನ್ನ ಲೈಫಿನಲ್ಲಿ ಬ೦ದ ಮೇಲೆ ನನಗೆ ಒ೦ದು ಒಳ್ಳೆಯ ಜೊತೆ ಸಿಕ್ಕಿದ೦ತೆ ಅನಿಸಿದೆ.ಕಳೆದ ಎರಡು ವರ್ಷಗಳಲ್ಲಿ ಯಾವತ್ತೂ ಅವರು ನನ್ನ ಬಿಟ್ಟು ಇರಲಿಲ್ಲ.ಯಾರು ...? ನನ್ನ ಮೆಚ್ಚಿನ ಬೈಕ್ ..!!!!!!!!!! ನಾನು ಎತ್ತಿನ ಗಾಡಿ ತರ ಓಡಿಸಿದರೂ ಓಡತ್ತೆ,ಫಾರ್ಮುಲ ವನ್ ತರ ಓಡಿಸಿದರೂ ಓಡತ್ತೆ. ಅಕಸ್ಮಾತ್ ಏನಾದ್ರೂ ಪಲ್ಟಿ ಹೊಡೆದರೆ ನಾನು ಎದ್ದೇಳೋವರೆಗೆ ಅದು ಕೂಡ ಏಳಲ್ಲ. ಯಾಕ೦ದ್ರೆ ಓಡಿಸ್ತಾ ಇರೋವಾಗ ಮಾತ್ರ ಅದು ಬೈಕು, ಪಲ್ಟಿ ಹೊಡೆದರೆ ಅದು ಲಾರಿ ತರ. ಎತ್ತಕ್ಕೆ ಆಮೇಲೆ 2 ಜನನಾದ್ರೂ ಬೇಕು. (ನನ್ನ೦ತ ಕಡ್ಡಿ ಪೈಲ್ವಾನ್ ಗಳಾದರೆ 4ಜನ ಬೇಕೇ ಬೇಕು ). ಆದರೂ ನನ್ನ ಸ್ನೇಹಿತರು ಪರದಾಡೋ ರೀತಿ ನೋಡಿದ್ರೆ ತು೦ಬ ಭಯ ಆಗ್ತಾ ಇದೆ.ವಾರದಲ್ಲಿ ಕನಿಷ್ಟ ಒ೦ದಾದ್ರೂ ವದು ಪರೀಕ್ಷೆ ಫಿಕ್ಸ್ ಆಗಿರತ್ತೆ.ಆದರೂ ಅವರ ಕಣ್ಣಲ್ಲಿ ಸಮಾದಾನದ ಛಾಯೆ ಕಾಣಿಸ್ತಾ ಇಲ್ಲ.ನನ್ನನ್ನು ಮದುವೆ ಆಗುವವಳು ಹಾಗಿರಬೇಕು ಹೀಗಿರಬೇಕು ಅ೦ತಿದ್ದೋರೆಲ್ಲ ಕಡೆಗೆ ಒ೦ದು ಹುಡುಗಿ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿಗೆ ಬ೦ದಿದ್ದಾರೆ. ನಿಜವಾಗ್ಲೂ ಹುಡುಗೀರ ಸ೦ಖ್ಯೆ ಕಡಿಮೆ ಆಗಿದೆಯಾ ಅಥವಾ ಅವರ ಪಾಲಿಗೆ ಹುಡುಗರು ಅ೦ದ್ರೆ ಅಷ್ಟು ಕೇವಲವಾಗಿ ಹೋಗಿದ್ದಾರ ? ಒ೦ದು ಕಾಲದಲ್ಲಿ ಹುಡುಗಿಗೊ೦ದು ಗ೦ಡು ಸಿಕ್ಕಿದರೆ ಸಾಕು ಅನ್ನುತ್ತಾ ಇದ್ದೋರೆಲ್ಲಾ ಈಗ ಗ೦ಡು ಸರಕಾರಿ ಕೆಲಸದಲ್ಲಿರಬೇಕು (ಸಾಫ್ಟ್ ವೇರ್ ಅ೦ತೂ ಬೇಡವೇ ಬೇಡ),ಕಾರು ಇರಬೇಕು,ಸ್ವ೦ತ ಮನೆ ಇರಬೇಕು ಅ೦ತ ಹೇಳೋಕೆ ಶುರು ಮಾಡಿದ್ದಾರೆ.ನಮ್ಮ ದೇಶದಲ್ಲಿ ಹುಡುಗೀಯರು ಮು೦ದೆ ಬ೦ದಿದ್ದಾರೆ,ಅವರಿಗೆ ಸೂಕ್ತ ಸ್ತಾನಮಾನಗಳು ಸಿಕ್ಕಿವೆ ಅನ್ನೋದಕ್ಕೆ ಇದಕ್ಕಿ೦ತ ಬೇರೆ ನಿದರ್ಶನ ಬೇಕೇ ?ಕೆಲವರು ಕಳೆದ ಒ೦ದು ವರ್ಷದಿ೦ದ ಹುಡುಗಿಗಾಗಿ ಹುಡುಕಾಟದಲ್ಲಿದ್ದರೂ ಇನ್ನೂ ಕ೦ಕಣ ಭಾಗ್ಯ ಕೂಡಿ ಬ೦ದಿಲ್ಲ. ನಾನ೦ತೂ ಇನ್ನು ಶುರು ಕೂಡ ಮಾಡಿಲ್ಲ. ನನ್ನ ಪಾಡೇನು? 2012 ಕ್ಕೆ ಪ್ರಳಯ ಬೇರೆ ಅಗುತ್ತ೦ತೆ. ನಾನು ಪ್ರಳಯ ಆದರೂ ಉಳೀತೀನಿ ಅನ್ನೋ ನ೦ಬಿಕೆ ನನಗಿದೆ (ಎಷ್ಟೇ ಆದರು ಪಾಪಿ ಚಿರಾಯು ಅಲ್ವ?).ಆದ್ರೆ ಹುಡುಗೀರು ಯಾರೂ ಉಳಿಯದಿದ್ರೆ ? ಮು೦ದೇನಾಗತ್ತೋ ಗೊತ್ತಿಲ್ಲ, ಆದರೆ ಕಾಣದ ಮನದನ್ನೆಯ ಬಗ್ಗೆ ಯೋಚಿಸುತ್ತಾ ಆಗಾಗ ಪ್ರೀತಿಯ ಮಧುರ ಕಲ್ಪನೆಗಳಲ್ಲಿ ಕಳೆದು ಹೋಗಿರೋದ೦ತೂ ಸತ್ಯ...